ಪ್ರವೇಶಗಳು 2025-26
ಆನ್ಲೈನ್ ಅರ್ಜಿ - ಗುರುಕುಲಮ್‌ನ ವಿದ್ಯಾರ್ಥಿ ನಿಲಯ 2025-26ರ ವರ್ಷದ [ 6 ನೇ ತರಗತಿಯ ಹಂತ ]
ಶ್ರೀಸತ್ಯಸಾಯಿಲೋಕಸೇವಾಗುರುಕುಲಮ್‌ನ ವಿವಿಧನಿವೇಶನಗಳಿಗೆ ದಾಖಲಾತಿಯನ್ನು ಬಯಸುವವರು ನೋಂದಣಿ ಮಾಡಲು ಈಗಅವಕಾಶವಿದೆ. ಪ್ರಕೃತ 5 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಅಥವಾ ಉತ್ತೀರ್ಣರಾಗಿರುವ ವಿದ್ಯಾರ್ಥಿ / ವಿದ್ಯಾರ್ಥಿನಿಯರು ತಾ 1 ಏಪ್ರಿಲ್ 2013 ರಿಂದ 31 ಮಾರ್ಚ್ 2015 ರ ಒಳಗಿನ ವಯಸ್ಸಿನವರು ಆಗಿರಬೇಕು.
ದಾಖಲಾತಿಯ ಕ್ರಮ:
ದಾಖಲಾತಿಯ ಕ್ರಮದ ಭಾಗವಾಗಿ ಆನ್ಲೈಲ್ ಮೂಲಕ ಅರ್ಜಿಗಳನ್ನು ಪೂರ್ಣಪ್ರಮಾಣದಲ್ಲಿ ಭರ್ತಿಮಾಡಿದಲ್ಲಿ ಮಾತ್ರ ಮೊದಲ ಆಯ್ಕೆಯ ನಿವೇಶನಕ್ಕೆ ಭೇಟಿ ನೀಡಿ ಅಲ್ಲಿಯ ವಾತಾವರಣ, ಸಂಸ್ಕೃತಿ ಹಾಗೂ ದಿನನಿತ್ಯದ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ನಿಮ್ಮನ್ನು ಕರೆಯುತ್ತಾರೆ. (ನಿಮ್ಮ ವಾಟ್ಸ್‌ಅಪ್ ನಂಬರನ್ನು ಅರ್ಜಿಯಲ್ಲಿ ನಮೂದಿಸಿರಿ.) ಮೊದಲನೆಯ ಆಯ್ಕೆಯ ಗುರುಕುಲಮ್‌ನ ನಿವೇಶನಕ್ಕೆ ಮಾತ್ರ ಪೋಷಕರು ಮತ್ತು ಮಕ್ಕಳಿಗೆ ಬರಲು ಅವಕಾಶವಿರುತ್ತದೆ.
ಎರಡು ಅಥವಾ ಹೆಚ್ಚು ಬಾರಿ ನಿವೇಶನಕ್ಕೆ ಭೇಟಿನೀಡಿ ಆಸಕ್ತಿ ಹೊಂದಿದ – ಅರ್ಹಪೋಷಕ ಮತ್ತು ವಿದ್ಯಾರ್ಥಿಗಳನ್ನು ಮಾತ್ರವೇ ಮುಂದಿನ ಮೌಲ್ಯಮಾಪನಕ್ಕಾಗಿ ಅದೇ ಗುರುಕುಲದ ವಸತಿನಿಲಯಕ್ಕೆ ಕರೆಯಲಾಗುವುದು. ಮೌಲ್ಯಮಾಪನದ ಬಗ್ಗೆ ನಿವೇಶನಕ್ಕೆ ನಿಮಗೆ ಕರೆ ಬರದೇ ಇದ್ದಲ್ಲಿ ದಾಖಲಾತಿಯ ನಿಮ್ಮ ಅರ್ಜಿಯ ಬಗ್ಗೆ ಯಾವುದೇ ವ್ಯವಹಾರಕ್ಕೆ ಅಸ್ಪದವಿರುವುದಿಲ್ಲ.
ಹೆಚ್ಚಿನ ಮಾಹಿತಿ ಮತ್ತು ಗುರುಕುಲದ ಬಗ್ಗೆ ಸಂರ್ಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿರಿ.
ಹಾಸ್ಟೆಲ್ ಅರ್ಜಿಯಲ್ಲಿ ಮುದ್ರಿಸಲಾದ ಐಡಿಯೊಂದಿಗೆ ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿದ ನಂತರ ಪ್ರವೇಶದ ವಿಚಾರಣೆಗಾಗಿ ಮೇಲಿನ ದಾಖಲೆಯಲ್ಲಿ ತಿಳಿಸಲಾದ ಮೊದಲ ಆದ್ಯತೆಯ ಕ್ಯಾಂಪಸ್ ಫೋನ್ ಸಂಖ್ಯೆಯನ್ನು ದಯವಿಟ್ಟು ಸಂಪರ್ಕಿಸಿರಿ.
ವಸತಿನಿಲಯದ ಕಲಿಕೆಯ ಕ್ರಮ: ಸದ್ಗುರು ಶ್ರೀ ಮಧುಸೂದನ ಸಾಯಿಯವರ ಮಾರ್ಗದರ್ಶನ ಮತ್ತು ವಿನ್ಯಾಸದಂತೆ, ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಲೌಕಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣವನ್ನು ನೀಡಲಾಗುವುದು. ನಿವೇಶನದ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಮುಕ್ತ ಶಿಕ್ಷಣ ಕ್ರಮದಲ್ಲಿ ಅಧ್ಯಯನ ಮಾಡಬೇಕಾಗುವುದು*.
ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 20 ಜನವರಿ 2025 . ಸರಿಯಾದ ಮಾಹಿತಿ ನೀಡದ ಮತ್ತು ಅಪೂರ್ಣ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.
ಅರ್ಹತೆ ಪಡೆದಿರುವ ವಿದ್ಯಾರ್ಥಿ ಮತ್ತು ಪೋಷಕರನ್ನು ಆಯಾ ಗುರುಕುಲಮ್‌ನ ನಿವೇಶನಕ್ಕೆ ನಿಗದಿತ ಸಮಯ ಮತ್ತು ದಿನಾಂಕದಂದು ಮೌಲ್ಯಮಾಪನಕ್ಕಾಗಿ ಕರೆಯಲಾಗುವುದು. ಅಂದು ಬರುವಾಗ ವಿದ್ಯಾರ್ಥಿಯ 4 ಅಥವಾ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಥವಾ 5 ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ ಅಂಕಪಟ್ಟಿ, ಆಧಾರ್ ಕಾರ್ಡಿನ ಪ್ರತಿ ಮತ್ತು 2 ಪ್ರತಿ ಭಾವಚಿತ್ರವನ್ನು ತರಬೇಕು. ಅಲ್ಲದೆ ಪೋಷಕರ ಆಧಾರ್ ಕಾರ್ಡಿನ ಪ್ರತಿ ಮತ್ತು ಒಂದು ಭಾವಚಿತ್ರವನ್ನು ತಪ್ಪದೆ ತರಬೇಕಾಗುತ್ತದೆ.
ನೀವು ಭರ್ತಿಮಾಡಿದ ಅರ್ಜಿಯ ಪ್ರತಿ ಬೇಕಾದಲ್ಲಿ, ಅರ್ಜಿಯಲ್ಲಿ ನಿಮ್ಮ ಇಮೈಲ್ ವಿಳಾಸವನ್ನು ನಮೂದಿಸಬೇಕಾಗುವುದು.
ಹೆಚ್ಚಿನ ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ನೀವು ಆಯ್ಕೆಮಾಡಿಕೊಂಡ ಗುರುಕುಲದ ಸಮನ್ವಯ ಅಧಿಕಾರಿ ಅಥವಾ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಸಂಪರ್ಕಿಸಬಹುದು.
ಕ್ಯಾಂಪಸ್ ಸಂಪರ್ಕ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.
ಕೆಳಗೆ ಕೊಟ್ಟಿರುವ ಆನ್ಲೈನ್ ಅರ್ಜಿಯನ್ನು ಭರ್ತಿಮಾಡಿರಿ. ಈ ಬಗ್ಗೆ ಏನಾದರೂ ಸಮಸ್ಯೆ ಕಂಡುಬಂದಲ್ಲಿ ದಯವಿಟ್ಟು ಕೆಳಗಿನ ಈ ಮೈಲ್ / ಫೋನ್‌ನ್ನು ಸಂಪರ್ಕಿಸಬಹುದು.
admissions.gurukulam@ssslsg.org or call 7892940544.
ಅರ್ಜಿ ಸಲ್ಲಿಸುವ ಮುನ್ನ ದಯವಿಟ್ಟು ಗಮನಿಸಿ: 5ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆನ್ಲ್ಯೆನ್ ಅರ್ಜಿಯ ಗ್ಗೆ ಕೆಂಪು ಬಟನ್ ಕ್ಲಿಕ್ ಮಾಡಿರಿ.
ಆನ್ಲೈನ್ ಅರ್ಜಿಯನ್ನು ಭರ್ತಿಮಾಡಿದ ನಂತರ ಸಂಬಂಧಪಟ್ಟ ಗುರುಕುಲದ ಸಮನ್ವಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
(* – ಚಿಕ್ಕಬಳ್ಳಾಪುರದಲ್ಲಿರುವ ಹುಡುಗಿಯರ ವಸತಿನಿಲಯದಲ್ಲಿ ರಾಜ್ಯ ಶಿಕ್ಷಣ ಕ್ರಮವನ್ನು ಅನುಸರಿಸಲಾಗುವುದು.)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ